Scam or fraud: Karnataka Bank — service default

Submitted by: U L Udaya Kumar

Complaint Details:
ರಿಗೆ,
ಆಫೀಸರ್
ಕರ್ನಾಟಕ ಬ್ಯಾಂಕ್ ಲಿ
ಕೇಂದ್ರ ಕಚೇರಿ
ರಿಂದ,
ಯು ಎಲ್ ಉದಯ್ ಕುಮಾರ್
ಪತ್ರಿಕಾ ವರದಿಗಾರರು
ಪೊಲೀಸ್ ಠಾಣೆಯ ಬಳಿ ಉಪ್ಪಿನಂಗಡಿ ದ.ಕ ೯೪೪೮೭೨೫೯೯೮, ೯೭೪೧೮೯೫೯೯೮
ವಿಷಯ : ದ.ಕ ಜಿಲ್ಲೆಯ ಪುತ್ತೂರು ಶಾಖೆಯಲ್ಲಿ ತೆರೆದಿರುವ ಉಳಿತಾಯ ಖಾತೆಯು ನಿರ್ಜಿವ ಗೊಂಡಾಗ ಅದನ್ನು ಉಪ್ಪಿನಂಗಡಿ ಶಾಖೆಯಲ್ಲಿ ಪುನರ್ಜೀವಗೊಳೀಸಲು ಅಸಾಧ್ಯವೆಂದು ತಿಳಿಸಿರುವ ಬಗ್ಗೆ .
ಮಾನ್ಯರೇ,
ಮೇಲಿನ ವಿಳಾಸವನ್ನು ಹೊಂದಿರುವ ನಾನು, ತಮ್ಮ ಬ್ಯಾಂಕಿನಲ್ಲಿ ಕಳೆದ ೨೪ ವರ್ಷಗಳಿಂದ ಗ್ರಾಹಕನಾಗಿರುವೆನು. ಪ್ರಾರಂಭದಲ್ಲಿ ದ.ಕ ಜಿಲ್ಲೆಯ ಪುತ್ತೂರು ಶಾಖೆಯ ಗ್ರಾಹಕನಾಗಿದ್ದು, ಬಳಿಕ ಉಪ್ಪಿನಂಗಡಿಯಲ್ಲಿ ಶಾಖೆ ಪ್ರಾರಂಭವಾದ ಕಾರಣ ನನ್ನ ವ್ಯವಹಾರವನ್ನು ಉಪ್ಪಿನಂಗಡಿಯಲ್ಲಿ ನಡೆಸಿರುವೆನು. ಪುತ್ತೂರು ಶಾಖೆಯಲ್ಲಿ ಹೊಂದಿದ್ದ ನನ್ನ ಉಳಿತಾಯ ಖಾತೆ ಸಂಖ್ಯೆ ಹಿಂದಿನ ಸಂಖ್ಯೆ ( ೧೦೨೭೩) ಪ್ರಸಕ್ತ ಸಂಖ್ಯೆ [protected] ಕ್ಕೆ ಸಂಬಂಧಿಸಿ ಖಾತೆಯನ್ನು ಜೀವಂತವಾಗಿರಿಸುವ ಕಾರಣಕ್ಕೆ ರೂ ೧೦೦=೦೦ ನ್ನು ಪಾವತಿಸಲು ಈ ದಿನ ದಿನಾಂಕ ೨೪/೫/೨೦೧೮ ರಂದು ಉಪ್ಪಿನಂಗಡಿ ಶಾಖೆಗೆ ಹೋಗಿರುವೆನು. ಬ್ಯಾಂಕಿನ ಕ್ಯಾಶಿಯರ್ ಹಣ ಸ್ವೀಕರಿಸಿದರಾದರೂ, ಅಲ್ಲಿನ ಅಧಿಕಾರಿ ಖಾತೆ ನಿರ್ಜೀವಗೊಂಡಿದೆ ಹಣ ಸ್ವೀಕರಿಸಲು ಆಗುತ್ತಿಲ್ಲ. ನೀವು ಪುತ್ತೂರಿಗೆ ಹೋಗಿ ಖಾತೆಯನ್ನು ಪುನರ್ಜೀವಗೊಳಿಸಿ ಬನ್ನಿ ಎಂದು ತಿಳಿಸಿದರು. ( ಸದ್ರಿ ಖಾತೆಯ ಈ ಹಿಂದಿನ ವ್ಯವಹಾರ ೨/೬/೨೦೧೫ ) ನನ್ನ ಉಪ್ಪಿನಂಗಡಿ ಶಾಖೆಯಲ್ಲಿನ ಉಳೀತಾಯ ಖಾತೆ ಸಂಖ್ಯೆ [protected] ಆಗಿರುತ್ತದೆ.
ಆದರೆ ಕಳೆದ ಬಾರಿಯೂ ಈ ಖಾತೆ ನಿರ್ಜೀವಗೊಂಡಾಗ ಇಲ್ಲಿನ ಅಧಿಕಾರಿಗಳೇ ಅಗತ್ಯ ದಾಖಲೆಯನ್ನು ಇಲ್ಲಿಯೇ ಪಡೆದು ಖಾತೆಯನ್ನು ಪುನರ್ಜೀವ ಗೊಳೀಸಿದ್ದರೆಂದೂ ಅದರಂತೆ ಖಾತೆಯನ್ನು ಪುನರ್ಜೀವಗೊಳಿಸಬಹುದಲ್ಲವೆ ? ಎಂದು ವಿನಂತಿಸಿದ್ದೆ. ಯಾರಿಗೋ ಪೋನಾಯಿಸಿದ ಆ ಅಧಿಕಾರಿ ಈ ಬಗ್ಗೆ ಮಾಹಿತಿ ಕೇಳಿ ಬೇರೆ ಶಾಖೆಯ ಖಾತೆಯನ್ನು ಇಲ್ಲಿ ಪುನರ್ಜೀವಗೊಳಿಸಲು ಸಾಧ್ಯವಿಲ್ಲ ಎಂದು ಅಂತಿಮವಾಗಿ ತಿಳಿಸಿದರು. ಈ ಬಗ್ಗೆ ಬ್ಯಾಂಕ್ ಮೇನೇಜರ್ ರವರಲ್ಲಿ ವಿಚಾರಿಸಿ, ಈ ಹಿಂದೆ ಇಲ್ಲೇ ಪುನರ್ಜೀವಗೊಳ್ಳುತ್ತಿದ್ದ ವ್ಯವಸ್ಥೆ ಈಗ ಯಾಕಿಲ್ಲ ? ಎಂದು ಪ್ರಶ್ನಿಸಿದೆ. ಅದಕ್ಕವರು ನೀವು ಅಗತ್ಯ ದಾಖಲೆಯನ್ನು ಲಗತ್ತೀಕರಿಸಿ ಒಂದು ಮನವಿ ಪತ್ರ ಸಲ್ಲಿಸಿ, ನಾವು ಅದನ್ನು ಪುತ್ತೂರಿಗೆ ಕಳುಹಿಸಿ ಬಳಿಕ ಖಾತೆಯನ್ನು ಪುನರ್ಜೀವಗೊಳಿಸಲು ನಿಮ್ಮನ್ನು ಕರೆಯುತ್ತೇವೆ . ನೀವು ಬರಬೇಕಾಗುತ್ತದೆ ಎಂದು ತಿಳಿಸಿದರು.
ಬೇರಾವುದೇ ದಾರಿ ಕಾಣದೆ ನಾನು ಬ್ಯಾಂಕ್ ನಲ್ಲಿ ಪಾವತಿಸಿದ ಹಣವನ್ನು ಹಿಂಪಡೆಯಬೇಕೆ ಎಂದು ಮತ್ತೆ ಅಧಿಕಾರಿಯ ಬಳೀಗೆ ಹೋದೆ. ಅದಕ್ಕವರು ಹೌದು ನಿರ್ಜೀವ ಖಾತೆಗೆ ಹಣ ಜಮಾಯಿಸುವಂತಿಲ್ಲ . ನೀವು ಹಣವನ್ನು ಮರಳಿ ಪಡೆದುಕೊಳ್ಳಿ. ನಿಮಗೆ ನೀಡಲಾದ ಕೌಂಟರ್ ಪೈಲ್ ಹಿಂತಿರುಗಿಸಿ ಹಣ ಹಿಂಪಡೆಯಿರಿ ಎಂದು ತಿಳಿಸಿದರು. ಅದರಂತೆ ನಾನು ಕ್ಯಾಶಿಯರ್ ಕೈಗೆ ಕೌಂಟರ್ ಪೈಲ್ ನೀಡಿ ಹಣವನ್ನು ಕೇಳಿದೆ. ಆದರೆ ಕ್ಯಾಶಿಯರ್ ಕಂಪ್ಯೂಟರ್ ನಲ್ಲಿ ಖಾತೆಯನ್ನು ಜೀವಂತ ಗೊಳಿಸಿದ್ದೇನೆ. ಇನ್ನು ಹಣ ಪಾವತಿಸಬಹುದೆಂದು ತಿಳಿಸಿದರು. ಅದಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ ಆ ಅಧಿಕಾರಿ, ಬೇಡ ಬೇಡ ಖಾತೆ ನಮ್ಮ ಶಾಖೆಯದ್ದಲ್ಲ. ಅದು ಬೇರೆ ಶಾಖೆಯದ್ದು ನೀವು ಹಣ ವಾಪಾಸು ಮಾಡಿ. ಖಾತೆಯನ್ನು ಪುನರ್ಜೀವ ಗೊಳಿಸುವುದು ಬೇಡ ಎಂದು ಆದೇಶಿಸಿದರು.
ಒಟ್ಟು ಈ ವಿದ್ಯಾಮಾನದಿಂದ ನನಗೆ ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಿರುವ ಸೇವೆಯನ್ನು ಒದಗಿಸಲು ಇಷ್ಠವಾಗದ ಮಾನಸಿಕ ಸ್ಥಿತಿಯನ್ನು ಅಧಿಕಾರಿ ಹೊಂದಿರುವಂತೆ ಕಂಡು ಬಂದಿತ್ತು. ಪೂರಕವೆಂಬಂತೆ ನನ್ನ ಪತ್ನಿಯ ಹೆಸರಿನಲ್ಲಿದ್ದ ಠೇವಣಿಯ ಇಂಟರೆಸ್ಟ್ ಸ್ಟೇಟ್ಮೆಂಟ್ ಕೇಳಲು ಹೋದಾಗಲೂ ಆಕೆಯ ಕಸ್ಟಮರ್ ಐಡಿ ಪುತ್ತೂರು ಶಾಖೆಯದ್ದೆಂದು ಹೇಳಿ ಅಲ್ಲಿಂದಲೇ ಪಡೆಯಬೇಕೆಂದು ತಿಳಿಸಿದ್ದರು. ಅದರೆ ಠೇವಣಿ ಉಪ್ಪಿನಂಗಡಿ ಶಾಖೆಯದ್ದೆಂದು ತಿಳಿಸಿದ ಬಳಿಕ ಸ್ಟೇಟ್ ಮೆಂಟ್ ಒದಗಿಸಿದರು.
ಈ ಮೇಲೆ ಉಲ್ಲೇಖೀಸಿದ ವಿದ್ಯಾಮಾನದಲ್ಲಿ ನಾನಿಂದು ಅಸಂತೋಷದಿಂದ ಶಾಖಾ ಕಚೇರಿಂದ ಹಿಂತಿರುಗಬೇಕಾಯಿತು. ಒರ್ವ ಪರಿಚಿತ ಗ್ರಾಹಕನಿಗೆ ಕೊಡಲು ಸಾಧ್ಯವಿರುವ ಉತ್ತಮ ಸೇವೆಯನ್ನು ಕೊಡದೆ ಇರುವ ಕೃತ್ಯ ನಡೆದಿದೆ ಎಂಬ ಭಾವನೆ ನನನ್ನು ಆವರಿಸಿದೆ. ಅಲ್ಲಿನ ಅಧಿಕಾರಿಯ ಮನೋಭಾವ ಗ್ರಾಹಕರನ್ನು ಸೆಳೆಯುವ ಬದಲು ಸತಾಯಿಸುವಂತೆ ಇದೆಯೇನೋ ಎಂಬ ಭಾವನೆ ನನ್ನಲ್ಲಿ ಮೂಡಿದೆ . ಈ ಕಾರಣಕ್ಕೆ ಪ್ರಕರಣವನ್ನು ತಮ್ಮ ಗಮನಕ್ಕೆ ತಂದಿರುವೆನು.
ನಿಜವಾಗಿಯೂ ಬೇರೆ ಶಾಖೆಯಲ್ಲಿನ ಉಳಿತಾಯ ಖಾತೆಯು ನಿರ್ಜೀವಗೊಂಡದ್ದೇ ಆದರೆ ಅದನ್ನು ಸಮೀಪದ ಶಾಖೆಗಳಲ್ಲಿ ಪುನರ್ಜೀವಗೊಳೀಸಲು ಸಾಧ್ಯವಿಲ್ಲವೆ ? ಅಪರಿಚಿತ ಗ್ರಾಹಕರ ಬಗ್ಗೆ ಸಂಸ್ಥೆ ಯಾವುದೇ ಕಠಿಣ ನಿಲುವು ತಾಳಬಹುದು., ಆದರೆ ಪರಿಚಿತವಾಗಿರುವ, ಶಾಖೆಯಲ್ಲಿ ಠೇವಣಾತಿ ವ್ಯವಹಾರ ನಡೆಸುವ ಗ್ರಾಹಕರಿಗೆ ಈ ವಿಚಾರದಲ್ಲಿ ಸೇವೆ ನೀಡಲು ಸಾಧ್ಯವಿಲ್ಲದ ನಿಯಾಮಾವಳಿ ಇದೆಯೇ ? ಇದ್ದರೆ ನನ್ನ ಆಕ್ಷೇಪವಿಲ್ಲ. ಆದರೆ ಸತಾಯಿಸುವ ನಡೆಯೇ ಇದೆನಿಸಿದರೆ ದಯವಿಟ್ಟು ಸರಿಪಡಿಸಿ . ಯಾಕೆಂದರೆ ೨೦೧೫ ರಲ್ಲಿ ನಾನು ಈ ಖಾತೆಯನ್ನು ಉಪ್ಪಿನಂಗಡಿ ಶಾಖೆಯಲ್ಲಿಯೇ ಪುನರ್ಜೀವಗೊಳೀಸಿ ಉಳಿಸಿಕೊಳ್ಳಲು ಕಾರಣರಾದವರು ನಿಮ್ಮ ಸಿಬ್ಬಂದಿಗಳೇ. ಅಂದು ಅವರು ನೀಡಿದ ಸೇವಾ ಗುಣದಿಂದಲೇ ಕರ್ನಾಟಕ ಬ್ಯಾಂಕ್ ಬಗ್ಗೆ ನನಗೆ ಅತೀವ ಗೌರವದ ಭಾವ ಬಂದಿತ್ತು. ಇಂದು ವ್ಯತಿರಿಕ್ತ ಸೇವೆ ಕಂಡು ಬಂದಾಗ ಮನಸ್ಸು ಭಾರವಾಯಿತು. ಎಲ್ಲೋ ಅನ್ಯಾಯ ನಡೆದಿದೆಯೋ ಎಂಬ ಅನಿಸಿಕೆ ಮನದಲ್ಲಿ ಮೂಡಿತ್ತು. ಮನಸ್ಸು ತಿಳಿಗೊಳಿಸಲು ಈ ಪ್ರಯತ್ನ ಮಾಡಿದ್ದೇನೆ. ನನ್ನ ತಿಳುವಳಿಕೆ ತಪ್ಪಿದ್ದರೆ ನನಗೆ ತಿಳಿಸಿ. ನಿಮ್ಮ ಸಿಬ್ಬಂದಿಗಳ ನಡೆಯಲ್ಲಿ ತಪ್ಪು ನಡೆದಿದ್ದರೆ ಸರಿಪಡಿಸಲು ಮುಂದಾಗಿ .
ಇತೀ ನಿಮ್ಮ ವಿಶ್ವಾಸಿ
ದಿನಾಂಕ: ೨೪/೫/೧೮
ಸ್ಥಳ : ಉಪ್ಪಿನಂಗಡಿ ಯು ಎಲ್ ಉದಯ್ ಕುಮಾರ್

Comments

comments